ಮುಳ್ಳಳ್ಳಿ ಎಂಎಲ್ಎ ಆಗ್ತಾನಂತೆ?
ಬೆಳಗಾವಿ ಜಿಲ್ಲಾ ಪಂಚಾಯತಿಗೆ ಮುಳ್ಳುಬೇಲಿ ಹಚ್ಚಿಕೊಂಡು ಕುಳಿತಿರುವ,ಮುಳ್ಳಳ್ಳಿ ಗರ್ದಿಗಮ್ಮತ್ತು ನ್ಯೂಸ್ ಚಾನೆಲ್ ಅವನ ಬಗ್ಗೆ ವರದಿ ಮಾಡಿದ್ದಕ್ಕೆ ಸಿಕ್ಕ ಸಿಕ್ಕವರಮೇಲೆ ಕೆಂಡ ಕಾರುತ್ತಿದ್ದಾನಂತೆ.
ತನ್ನ ಹುಟ್ಟೂರ ಬಗ್ಗೆ ,ಶಿಕ್ಷಣದ ಬಗ್ಗೆ ,ತನ್ನ ಹೆಂಡತಿಗೂ ಗೊತ್ತಿರದ ಸಂಗತಿಗಳನ್ನುಯಾರೂಬಾಯಿ ಬಿಟ್ಟಿರಬಹುದು? ಎಂದು ತನ್ನ ಸಿಬ್ಬಂದಿಯ ಪ್ರತಿಯೊಬ್ಬರ ಮೇಲೂ ಸಂಶಯ ದೃಷ್ಟಿಯಿಂದ ನೋಡುತ್ತಿದ್ದಾನಂತೆ.ಯಾವುದಾದರೂ ಮಾಧ್ಯಮದವರು ಪ್ರಶ್ನೆ ಕೇಳಿದರೆ ಸಿಡಿಮಿಡಿಗೊಳ್ಳುತ್ತಿದ್ದಾನಂತೆ.
ನಾನು ಸ್ವಲ್ಪ ದಿನದಲ್ಲಿ ನನ್ನ ತಾಕತ್ತೆನು ಎಂಬುದನ್ನು ಬೆಳಗಾವಿ ಜಿಲ್ಲೆಯ ಜನತೆಗೆ ತೋರಿಸುತ್ತೇನೆ ,ಮುಂಬರುವ ವಿಧಾನಸಭೆಗೆ ಬೆಳಗಾವಿ ಜಿಲ್ಲೆಯ ಯಾವುದಾದರೂ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತ ಪಡಿಸುತ್ತಿದ್ದಾನಂತೆ.
ಕಾಂಗ್ರೆಸ್ಸಿನಿಂದ ಸ್ಪರ್ಧಿಸುವುದಾದರೆ ಯಲ್ಲಮ್ಮನ ಸವದತ್ತಿಯಿಂದ ಸ್ಪರ್ಧಿಸುವ ವಿಚಾರ ಮಾಡುತ್ತಿದ್ದಾನಂತೆ ಯಾಕೆಂದರೆ ಮುಳ್ಳೊಳ್ಳಿಯ ಹೆಂಡತಿ ತವರು ಮನೆ ಸವದತ್ತಿ ತಾಲೂಕಿನ ಮುನವಳ್ಳಿ ಇದ್ದುದ್ದರಿಂದ ಆ ಗ್ರಾಮಸ್ಥರ ಬೆಂಬಲವೂ ಆತನಿಗೆ ದೊರೆಯ ಬಹುದು ಎಂದು ಯೋಚಿಸಿ ತ್ತಿ ದ್ದಾನಂತೆ.
ರಾಯಬಾಗ ತಾಲೂಕಿನ ಕುಡಚಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ನೌಕರಿ ಮಾಡಿದ “ಪೀ ರಾಜೀವ್ “ಅವರು ನೌಕರಿಗೆ ರಾಜಿನಾಮೆ ಕೊಟ್ಟು ಶಾಸಕರಾದರೂ, ರಾಮದುರ್ಗದಲ್ಲಿ ಕೃಷಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಎಂ.ಎಲ್.ಎ. ಆದ” ಎನ್ ವಿ ಪಾಟೀಲ್ ರಂತೆ” ,ತಾನು ಕೂಡ ಎಂ.ಎಲ್.ಎ. ಆಗುವ ಕನಸು ಕಾಣುತ್ತಿದ್ದಾನಂತೇ.
ಬೆಳಗಾವಿ ಜಿಲ್ಲೆಯ ರಾಜ ಕಾರಣವೇ ಮುಳೊಳ್ಳಿ ಕಿಸೆಯಲ್ಲಿ ಇರುವಾಗ ಆತ ಕನಸು ಕಾಣುವುದು ತಪ್ಪೇನು ಅಲ್ಲ,
ಜನ ಇವರನ್ನು ಒಪ್ಪಿಕೊಳ್ಳುತ್ತಾರೋಅಥವಾ ಕೃಷ್ಣಾ ನದಿಯಲ್ಲಿ ಮುಳುಗಿಸತ್ತಾರೋ ,ಕಾದು ನೋಡಬೇಕಾಗಿದೆ?
ಬಾಪುಗೌಡ ಪಾಟೀಲ್